ಹೃದಯ ಗೀತೆ
ಈ ಹಾಡ ಹಾಡುವೆ ನಿನಗಾಗಿ
ಓ ನಲ್ಲನೆ ನಿನ್ನ ಸವಿ ನೆನಪಾಗಿ
ನಮ್ಮಯ ಪ್ರೀತಿಯ ಉಡುಗೊರೆಯಾಗಿ
ನಿನ್ನ ಹೊಸ ಬಾಳ ಹಾದಿಗೆ ಬೆಳಾಕಾಗಿ || ನಾ ಹಾಡುವೆ ||
ಪ್ರೀತಿಯೆಂಬ ಹೃದಯ ವೀಣೆಯ
ನುಡಿಸಿ ನಾ ಹಾಡುವೆ ನಿನಗಾಗಿ
ಮದುವೆಯೆಂಬ ನಮ್ಮಯ ಕನಸು
ನನಸಾಗಲಿಲ್ಲ ಈ ಜನುಮದಲ್ಲಿ || ನಾ ಹಾಡುವೆ ||
ಕಳೆದುಕೊಂದಿಹೆ ನಿನಗಾಗಿ ನಾ ಎಲ್ಲ
ಉಳಿದಿದೆ ಈ ಜೀವ ನಿನಗಾಗಿ ಹಾಡಲು
ತಿಳಿದಿಹೆ ನಾ . . . ಈ ಹಾಡು ನನ್ನ ಜೀವನದ
ಕೊನೆಯ ಹಾಡೆಂದು . . . .ನೀನೊಮ್ಮೆ ಆಲಿಸು . . .
ಈ ನನ್ನ ಹಾಡನು . . . . . .
ಈ . . . . . ನನ್ನ . . . . .ಹಾಡನು . . . . . || ನಾ. . . . . ಹಾ . . . . .ಡು . . . . ವೆ
No comments:
Post a Comment