ಕರುಣಾಕರ ವರಪುತ್ರ ಬಾರತದ ಸಿರಿ ಪ್ರೀತಿ,ದಯೆ, ಶಾಂತಿಯ ಪಥ ಭೂಮಂಡಳದಿ ತೋರಿ ||
ಪ್ರೀತಿಯ ಬಾಪು ಗೀತಾಪ್ರಿಯನೆನಸಿ
ಉಪವಾಸ ವ್ರತದ ವೀರ ತಪಸಿಯು ನೀನೆನಸಿ
ಅಪರಾಧವ ಮಾಡಿದವರಿಗೂ ನೀ ದಯೆತೋರಿಸಿ
ಸತ್ಯಾತ್ಮಕ ,ಸತ್ಯಾಶ್ರಯ ,ಸತ್ಯಾನ್ವೇಶಕನೆನಸಿ ||
ಮತ ಭೇದವನಳಿಸುತ ಜನಹಿತವ ನೀ ಬಯಸಿ
ಹರಿಜನರುದ್ದಾರಕೆ ನೀ ಅನವರತ ಶ್ರಮಿಸಿ
ದಲಿತೂದ್ಧಾರಕ ಬಾಪು ನೀನೆಂದೆನಿಸಿ
ಜಗ ಹರಸಿತು ನಿನಗೆ ತಲೆಬಾಗಿಸಿ ||
ಬಾ ಬಾ ಅಹಿಂಸಾ ಮೂ ತಿ F ಬಾ ಬಾ
ಇನ್ನೊಮ್ಮೆ ಜಗದಲಿ ಉದಯಿಸಿ ಬಾ
ಮೋಹನ ಕರಮ ಚಂದ ಗಾಂಧಿಯೇ ಬಾ
ಜಗದ ಶಾಂತಿ ತೋರು ಬಾ ಬಾ ಬಾಪು ಬಾ ಬಾ