Saturday, 25 June 2011

TIPS

ಮನಸ್ಸು ತಿಳಿಯಾಗಿದ್ದರೆ ಅವಕಾಶಗಳು ಹೇರಳವಾಗಿರುತ್ತವೆ.                                                                                          

ದೂರಕ್ಕೆ ದಾರಿ ಕಾಣಿಸುವುದಿಲ್ಲ. ಆದರೆ ಹತ್ತಿರದಿಂದ ನೋಡಿದಾಗ ಕೊನೆಗೆ ಕಿರು ದಾರಿಯಾದರೂ ಕಾಣಿಸುತ್ತದೆ.                          

ಗ್ರಹಚಾರವು ಕೆಟ್ಟಾಗ ಮುಖವೂ ಸಹ ಕೆಟ್ಟು ಹೋಗುತ್ತದೆ,

Wednesday, 4 May 2011

mother

ತಾಯಿ
ಬ್ರಹ್ಮಾಂಡಕಿಂತಲು ಭಾರವ ಹೊರುವವಳೇ
ಸದಾ ವಾತ್ಸಲ್ಯ ಮಯಿಯಾಗಿರುವವಳೇ 
ಕರುಳ ಕುಡಿಗಳಿಗೆ ಅಭಿಮಾನಿಯಾಗಿರುವವಳೇ 
ಸಂಕಷ್ಟಗಳ  ಸಂತಸದಿಂದ ಸ್ವಿಕರಿಸುವವಳೇ 
ಮಮತೆಯ ಮಡಿಲಲಿ ಮಕ್ಕಳ ಪೋಷಿಸುವವಳೇ 
ಬಾಲ್ಯದ ನೆನಪ ಮುಪ್ಪಿನವರೆಗೆ ಉಳಿಸಿರುವವಳೇ 
ಮಾತೆಯೇ, ನಿನಗೆ ಸರಿಸಾಟಿಯೇ ಈ ಇಳೆ 

Saturday, 30 April 2011

JOKE

ನಗಬೇಕು
ಹಾಸ್ಯ ಕವಿಗೆ ಮಹದಾಸೆ
ಜನ ನಗಬೇಕು ನಗಬೇಕು ನಗಬೇಕು
ಆ ಕವಿಯ ಹೆಂಡತಿಗೆ ಮಹದಾಸೆ 
ನಗ.ಬೇಕು  ನಗ.ಬೇಕು  ನಗ ಬೇಕು 

FRIENDSHIP

ಗೆಳೆತನ 
ಕಷ್ಟ್ಹಕೆ ಎಂದೂ ಒದಗುವ ಜನರು
ಭಾವನೆ ನನ್ನೊದ ಹಂಚಿಕೊಳುವರು
ಜಗದಲಿ ಎಲ್ಲೆಡೆ ದೊರೆಯುವರು
ಅವರೇ ನನ್ನ ಜೀವದ ಗೆಳೆಯರು

ಜೀವಕ್ಕೆ ಜೀವದ ಗೆಳೆತನ
ಇಲ್ಲ ಅದಕೆಂದು ಬಡತನ 
ನೋವು ನಲಿವಿನ ಸಂಬಂಧ 
ಎಂದಿಗೂ ಮುರಿಯದ ಅನುಬಂಧ 

ಎತ್ತರಕೆ ಹರಡಿದ ಮುಗಿಲೇ
ಅಳೆಯಲಾಗದ ನಿನ್ನಯ ಬಯಲೇ
ನಮ್ಮಯ ಗೆಳೆತನವ ನೋಡು
ವಿಶ್ವಕೆ ಈ ತತ್ವವ ಹರಡು

ಹಸಿದ ಹೊಟ್ಟೆಗೆ ಅನ್ನ,ಗಂಜಿ
ಬಾಳುವೆವು ನಾವು ಅದಕ್ಕಂಜಿ
ಸಿರಿತನ,ಬಡತನ ಶಾಶ್ವತವಲ್ಲ 
ಗೆಳೆತನದ ಮುಂದೆ ಏನೂ ಇಲ್ಲ.

 

Monday, 25 April 2011

JEEVANA

ಜೀವನ
 ದಿನ ದಿನವೂ ತೆವಳಿ ಸಾಗುತಿದೆ ಜನುಮ
ಕಷ್ಟ ಕೋಟಲೆ ನಿವಾರಿಸೂ ಹನುಮ
ಕೈಯೆತ್ತಿ ನೀ ವರ ನೀಡೋ ಜಂಗಮ
ವಿಶ್ವ ಶಾಂತಿಗೆ ಸಾರ್ಥಕವಾಗಲಿ ಜನುಮ ||

ಪರಿಣತಿ
ಪರರ ಕಂಡು ಬಿರು ನುಡಿಯದಿರು ಗೆಳತಿ
ನಿನ್ನೆ, ಇಂದು ಕಳೆದು ನಾಕೆ ಬರುವುದು ದುರ್ಗತಿ
ನಿನ್ನ ಮನದ ಗರಲು  ನಿನ್ನೋದಲಿಗೆ ಗರತಿ
ಇದ ತಿಳಿದರೆ ಜಗದಲಿ ನೀನೆ ಪರಿಣತಿ ||

ದೈವತ್ವ
ದೇಶ ಸೇವೆಗೆ ಮುದುಪಗಿರಲಿ ಪುರುಷತ್ವ
ದೀನರಲಿ ದೇವರ ನೋಡುವುದೇ ಮನುಷ್ಯತ್ವ
ಎಲ್ಲ ಮುಗಿದ ಮೇಲೆಯೇ ಪರತತ್ವ
ಅದರಿಂದ ಕೊನೆಗೆ ನೀ ಪಡೆಯುವೆ ದೈವತ್ವ ||

ಬೆಳಗು
ಗಾಳಿಯು ಸುಗಂಡವ ಹರಡುವಂತೆ
ಬೆಳಗು ಜಗವನೆಲ್ಲ ಬೆಳಗುವಂತೆ
ಸಕಲ ದುಕ್ಕಕು ಮೂಲ ಆಸೆಯಂತೆ
ಅಸೆ ಬಿಟ್ಟ ಮನುಜ ದೇವನಾಗುವಂತೆ ||






Wednesday, 20 April 2011

HEART SONG

                 ಹೃದಯ ಗೀತೆ

 ಈ ಹಾಡ ಹಾಡುವೆ ನಿನಗಾಗಿ
ಓ ನಲ್ಲನೆ ನಿನ್ನ ಸವಿ ನೆನಪಾಗಿ 
ನಮ್ಮಯ ಪ್ರೀತಿಯ ಉಡುಗೊರೆಯಾಗಿ 
ನಿನ್ನ ಹೊಸ ಬಾಳ ಹಾದಿಗೆ ಬೆಳಾಕಾಗಿ || ನಾ ಹಾಡುವೆ ||

ಪ್ರೀತಿಯೆಂಬ ಹೃದಯ ವೀಣೆಯ 
ನುಡಿಸಿ ನಾ ಹಾಡುವೆ ನಿನಗಾಗಿ
ಮದುವೆಯೆಂಬ ನಮ್ಮಯ ಕನಸು
 ನನಸಾಗಲಿಲ್ಲ ಈ ಜನುಮದಲ್ಲಿ || ನಾ ಹಾಡುವೆ ||

ಕಳೆದುಕೊಂದಿಹೆ ನಿನಗಾಗಿ ನಾ ಎಲ್ಲ
ಉಳಿದಿದೆ ಈ ಜೀವ ನಿನಗಾಗಿ ಹಾಡಲು
ತಿಳಿದಿಹೆ ನಾ . . . ಈ ಹಾಡು ನನ್ನ ಜೀವನದ 
ಕೊನೆಯ ಹಾಡೆಂದು . . . .ನೀನೊಮ್ಮೆ ಆಲಿಸು . . .
 ಈ ನನ್ನ ಹಾಡನು . . . . . . 
 ಈ . . . . . ನನ್ನ . . . . .ಹಾಡನು . . . . . || ನಾ. . . . . ಹಾ . . . . .ಡು . . . . ವೆ   


Varaputra

ಕರುಣಾಕರ ವರಪುತ್ರ ಬಾರತದ ಸಿರಿ 
ಪ್ರೀತಿ,ದಯೆ, ಶಾಂತಿಯ ಪಥ ಭೂಮಂಡಳದಿ ತೋರಿ ||

ಪ್ರೀತಿಯ ಬಾಪು ಗೀತಾಪ್ರಿಯನೆನಸಿ
ಉಪವಾಸ ವ್ರತದ ವೀರ ತಪಸಿಯು ನೀನೆನಸಿ
ಅಪರಾಧವ ಮಾಡಿದವರಿಗೂ ನೀ ದಯೆತೋರಿಸಿ
ಸತ್ಯಾತ್ಮಕ ,ಸತ್ಯಾಶ್ರಯ ,ಸತ್ಯಾನ್ವೇಶಕನೆನಸಿ ||

ಮತ ಭೇದವನಳಿಸುತ ಜನಹಿತವ ನೀ ಬಯಸಿ
ಹರಿಜನರುದ್ದಾರಕೆ ನೀ ಅನವರತ ಶ್ರಮಿಸಿ
ದಲಿತೂದ್ಧಾರಕ ಬಾಪು ನೀನೆಂದೆನಿಸಿ
ಜಗ ಹರಸಿತು ನಿನಗೆ ತಲೆಬಾಗಿಸಿ ||

ಬಾ ಬಾ  ಅಹಿಂಸಾ ಮೂ ತಿ F  ಬಾ ಬಾ 
ಇನ್ನೊಮ್ಮೆ ಜಗದಲಿ ಉದಯಿಸಿ ಬಾ 
ಮೋಹನ ಕರಮ ಚಂದ ಗಾಂಧಿಯೇ ಬಾ 
ಜಗದ ಶಾಂತಿ ತೋರು ಬಾ ಬಾ ಬಾಪು ಬಾ ಬಾ